ಅಳಿಗೊಳೆತ

ರೋಗಶಸ್ತ್ರಾದಲ್ಲಿ, ಆರೋಗ್ಯವಾಗಿರುವ ಭಾಗಗಳ ನಡುವೆ ಒಂದು ಗೊತ್ತಾದೆಡೆಯಲ್ಲಿ ಚಿಕ್ಕದಾಗಿ ಅಂಗಾಂಶ (ಟಿಷ್ಯೂ) ಇಲ್ಲವೇ ಮೂಳೆ ಸತ್ತು ಕೊಳೆತಿರುವುದು ಅಳಿಗೊಳೆತ (ನೆಕ್ರೋಸಿಸ್). ದೊಡ್ಡ ಭಾಗಗಳಲ್ಲೂ ಗೊತ್ತಾದ ಭಾಗಗಳಲ್ಲೂ ಸತ್ತು ಕೊಳೆತಿದ್ದರೆ ಅಳಿಕೊಳೆಪು ಎನ್ನುವುದು ರೂಢಿ, ಆದರೂ ರಕ್ತದ ಹರವಿಗೆ ತುಸು ಆತಂಕವಾದರೂ ಸಾಯುವ ಮೂಳೆ ಸತ್ತು ಕೊಳೆತಿರುವುದಕ್ಕೇ ಹೆಚ್ಚು ಅನ್ವಯ. ಒಂದೆಡೆಯ ರಕ್ತಪೂರೈಕೆಗೆ ತಡೆ, ಪೆಟ್ಟುಗಳು, ವಿಕಿರಣತೆ, ವಿದ್ಯುತ್ತು, ಹೊರಗಿನ ಇಲ್ಲವೇ ಮೈಯಲ್ಲೇ ಹುಟ್ಟುವ ವಿಷಕಾರಕಗಳು, ಏಕಾಣುಜೀವಿಗಳ ಜೀವವಿಷಗಳು (ಟ್ಯಾಕ್ಸಿನ್ಸ್) ಇವೆಲ್ಲ ಕಾರಣಗಳು. ಅಳಿಗೊಳೆತದ ಲಕ್ಷಣಗಳಿಗೆ ಕಾರಣ, ಜೀವಕಣಗಳನ್ನು ತಿಂದು ಕರಗಿಸುವ ಕಿಣ್ವಗಳು (ಎಂಜೈಮುಗಳು). ಕಾರಣಗಳಿಗೆ ತಕ್ಕ ಚಿಕಿತ್ಸೆಯಾಗಿ ಕೊಳೆತಿರುವುದನ್ನು ತೆಗೆದರೆ ಗುಣ.
(ನೋಡಿ- ಅಳಿಕೊಳಪು)									
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ